ಶೃಂಗೇರಿ: ಆಟೋ ಚಾಲಕನ ಮೇಲೆ ನಕ್ಸಲ್ ನಿಗ್ರಹ ದಳದ ಪೇದೆ ಹಲ್ಲೆ ನಡೆಸಿದ್ದನ್ನು ವಿರೋಧಿಸಿ, ಮುಷ್ಕರ ನಡೆಸಿದ ಚಾಲಕರು ರಸ್ತೆ ತಡೆಗೆ ಮುಂದಾದಾಗ ಲಘು ಲಾಠಿ ಪ್ರಹಾರ ಮಾಡಿ ಚದುರಿಸಿದ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆಯಿತು.
ಮುಖ್ಯ ರಸ್ತೆಯ್ಲಲಿ ಆಟೋ ಚಾಲನೆಮಾಡುತ್ದಿದ ಸುಬ್ರಹ್ಮಣ್ಯ ಎಂಬ ಚಾಲಕನಿಗೆ ಎಎನ್ಎಫ್ ಪೇದೆ ಹರೀಶ್ ಎಂಬುವರು ವಿನಾಕಾರಣ ಹಲ್ಲೆ ಮಾಡಿ ಆತನ ಸಮವಸ್ತ್ರ ಹರಿದರೆಂಬ ಕಾರಣಕ್ಕೆ ಉದ್ರಿಕ್ತರಾದ ಆಟೋ ಚಾಲಕರು ಪೊಲೀಸ್ ಠಾಣೆ ಎದುರು ಪ್ರತಿಭಟನಾ ಧರಣಿ ನಡೆಸಿದರು. ಪಟ್ಟಣ ಪ್ರವೇಶ ದ್ವಾರದ ಬಳಿ ಹಲವು ಗಂಟೆ ಕಾಲ ರಸ್ತೆ ತಡೆ ನಡೆಸಿ ಟೈರ್ಗಳಿಗೆ ಬೆಂಕಿ ಹಚ್ಚಿದರು. ಹಲ್ಲೆ ಮಾಡಿದ ಪೇದೆಯನ್ನು ಬಂಧಿಸಬೇಕೆಂದು ಆಗ್ರಹಿಸಿದ ಆಟೋ ಚಾಲಕರು, ಈ ಪೇದೆ ಹಲವು ಬಾರಿ ಅನುಚಿತವಾಗಿ ವರ್ತಿಸುತ್ದಿದನೆಂದು ದೂರಿದರು.
ಜಿ.ಪಂ.ಸದಸ್ಯ ಕೃಷ್ಣಮೂರ್ತಿ, ಶಿವಶಂಕರ್, ತಾ.ಪಂ.ಅಧ್ಯಕ್ಷ ನಯನ, ಪ.ಪಂ.ಅಧ್ಯಕ್ಷ ಪರಾಶರ ಹಾಗೂ ಚುನಾಯಿತ ಪ್ರತಿನಿಧಿಗಳು ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾಗ ವಿಚಾರಣೆಗೆಂದು ವಶಕ್ಕೆ ಪಡೆದ ಇಬ್ಬರು ಆಟೋ ಚಾಲಕರ ಮೇಲೆ ಠಾಣೆ ಒಳಗೆ ಪೊಲೀಸರು ಹಲ್ಲೆ ನಡೆಸಿದರು.
ಚುನಾಯಿತ ಪ್ರತಿನಿಧಿಗಳ ಎದುರೆ ಆಟೋ ಚಾಲಕರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಅವರೆಲ್ಲರೂ ಪ್ರತಿಭಟನೆ ನಡೆಸಿದರು.
ಆಟೋ ಚಾಲಕರ ಮುಷ್ಕರದಿಂದ ಜನಜೀವನ ಅಸ್ತವ್ಯವಸ್ತ ಗೊಂಡಿಗೆ. ಪಟ್ಟಣ ಉದ್ವಿಗ್ನ ಸ್ಥಿತಿಯಲ್ಲಿದೆ. ಡಿವೈಎಸ್ಪಿ ಅಬು ಅಹಾದ್, ಅಡಿಷನಲ್ ಎಸ್ಪಿ ಮುತ್ತೂರಾಯ ಸ್ಥಳಕ್ಕೆ ಭೇಟಿ ನೀಡಿ ಆಟೋ ಚಾಲಕರೊಂದಿಗೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿದರು.
