ಚಿಕ್ಕಮಗಳೂರು: ‘ಮನುಷ್ಯನ ದುರಾಸೆಗಳಿಗೆ ಕಡಿವಾಣ ಬಿದ್ದಾಗ ಭೂಮಿ ಬಿಸಿಯಾಗುವುದು ನ್ಲಿಲುತ್ತದೆ…’ ಇದು ಚಿಕ್ಕಮಗಳೂರು ಕ್ರೈಸ್ತ ಧರ್ಮಕ್ಷೇತ್ರದ ಬಿಷಪ್ ಡಾ.ಟಿ.ಆಂತೋಣಿ ಸ್ವಾಮಿ ಅವರು ‘ಕ್ರಿಸ್ಮಸ್’ ಅಂಗವಾಗಿ ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ ಮಾತು.
ಕ್ರಿಸ್ಮಸ್ ಸಂದೇಶದ ಪ್ರಮುಖ ಅಂಶಗಳಿವು…
ಜಾಗತಿಕ ತಾಪಮಾನ:
ದೇವರ ಸೃಷ್ಟಿಯಲ್ಲಿ ಅಂದರೆ ಪ್ರಕೃತಿಯಲ್ಲಿ ಮನುಷ್ಯನ ವಿಪರೀತ ಹಸ್ತಕ್ಷೇಪವೇ ಭೂಮಿ ಬಿಸಿಯಾಗಲು ಪ್ರಮುಖ ಕಾರಣ. ಮನುಷ್ಯ ಪ್ರಕೃತಿಯನ್ನು ನಾಶ ಮಾಡಲು ಮುಂದಾದ ಸಂದರ್ಭದಲ್ಲಿ ಪ್ರಕೃತಿ ತನ್ನ ಸಿಟ್ಟನ್ನು ತೋರಿಸುತ್ತದೆ. ಕಾಡು ಮತ್ತು ಜಲ ಸಂಪನ್ಮೂಲಗಳ ರಕ್ಷಣೆಯಿಂದ ಮಾತ್ರ ಭೂಮಿಯನ್ನು ಉಳಿಸಲು ಸಾಧ್ಯ. ದುರಾಸೆಯನ್ನು ಬದಿಗಿಟ್ಟು ಪ್ರಾಮಾಣಿಕ ಬಾಳು ಬಾಳುವ ನಿರ್ಧಾರವನ್ನು ಮನುಷ್ಯರು ಮಾಡಿದರೆ ಪರಿಸ್ಥಿತಿ ತಾನಾಗಿಯೇ ಸುಧಾರಿಸುತ್ತದೆ.
ಜಾಗತಿಕ ತಾಪಮಾನ ತಡೆಯಲು ಅತಿ ಮುಖ್ಯವಾಗಿ ಬೇಕಾಗಿರುವುದು ಸರಳ ಜೀವನ. ಏಸು ಸ್ವಾಮಿ ಅದನ್ನು ತಮ್ಮ ಬದುಕಿನಲ್ಲೇ ಅಳವಡಿಸಿಕೊಂಡು ತೋರಿಸಿದರು. ಈ ವರ್ಷದ ಕ್ರಿಸ್ಮಸ್ ಆಚರಣೆ ಸಂದರ್ಭದಲ್ಲಿ ಪ್ರಭು ಏಸುವಿನ ಸರಳತೆಯನ್ನು ಮನನ ಮಾಡಿಕೊಳ್ಳುವ ಮತ್ತು ಮನನ ಮಾಡಿಸುವ ಪ್ರಯತ್ನಗಳು ಹೆಚ್ಚಾಗಿ ನಡೆಯಬೇಕು.
ಮನುಷ್ಯನೊಬ್ಬ ಸರಳತೆಯನ್ನು ಅಪ್ಪಿಕೊಂಡಾಗ ಸಹಜವಾಗಿಯೇ ಕಾಮ, ಕ್ರೋಧ, ಮದ ಮತ್ತು ಮತ್ಸರಗಳು ಅವನಿಂದ ದೂರವಾಗುತ್ತವೆ. ಇದು ವ್ಯಕ್ತಿಯ ಆಧ್ಯಾತ್ಮಿಕ ಜೀವನದ ಪ್ರಗತಿಗೂ ಸಹಕಾರಿ.
ಬದುಕು ಮುಖ್ಯ:
ಸಿರಿತನ ಮತ್ತು ಬಡತನಕ್ಕಿಂತ ನಾವು ಬದುಕುವ ಬದುಕು ಬಹುಮುಖ್ಯ. ಏಸುಕ್ರಿಸ್ತ ಹುಟ್ಟಿದ್ದು ಕೊಟ್ಟಿಗೆಯಲ್ಲಿ ಆದರೆ ತಮ್ಮ ಸಮಾಜ ಪ್ರೀತಿಯ ಪ್ರಾಮಾಣಿಕ ಬದುಕಿನಿಂದ ಅವರು ಜಗತ್ತಿಗೆ ಒಡೆಯರಾದರು. ಆಧ್ಯಾತ್ಮ ಸಾಮ್ರಾಜ್ಯವನ್ನೇ ಆಳಿದ ಏಸುಕ್ರಿಸ್ತ ಲೌಕಿಕದಲ್ಲಿ ಬಡವರಾಗಿಯೇ ಕಾಣಿಸಿಕೊಂಡರು. ತಮ್ಮ ಜೀವಿತಾವಧಿಯ ಕೊನೆಯ ಮೂರು ವರ್ಷಗಳಲ್ಲಿ ಬಹಿರಂಗ ಜೀವನಕ್ಕೆ ಕಾಲಿಟ್ಟ ಅವರು ಎಲರಿಗೂ ಮಾದರಿಯಾಗುವಂತೆ ಬದುಕಿ ತೋರಿಸಿದರು.
ದೇವರನ್ನು ನಂಬುವ ಎಲ್ಲರೂ ಪರರ ಬಗ್ಗೆ ಪ್ರೀತಿ ಮತ್ತು ಗೌರವ ಇಟ್ಟುಕೊಳ್ಳಲೇ ಬೇಕು. ದೇವರ ಸೃಷ್ಟಿಯನ್ನು ಗೌರವಿಸಿದಾಗ, ಕಾಪಾಡಿದಾಗ ಮಾತ್ರ ದೇವರನ್ನು ಗೌರವಿಸಿದಂತೆ ಆಗುತ್ತದೆ. ತನ್ನನ್ನು ತಾನು ಅರ್ಥ ಮಾಡಿಕೊಂಡು ಇತರರ ಮನಸ್ಸನ್ನೂ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ.
ಭ್ರಷ್ಟ ರಾಜಕಾರಣ:
ಇಂದಿನ ರಾಜಕಾರಣ ಸ್ವಾರ್ಥ ಹಾಗೂ ಭ್ರಷ್ಟತೆಯಿಂದ ತುಂಬಿದೆ. ರಾಜಕೀಯ ಜೀವನದಲ್ಲಿರುವ ವ್ಯಕ್ತಿ ಪರರ ಒಳಿತಿಗಾಗಿ ಇಲ್ಲಿಗೆ ಬಂದಿದ್ದೇನೆ ಎಂದು ತಿಳಿದುಕೊಳ್ಳಬೇಕು. ಲ್ಯಾಟಿನ್ ಭಾಷೆಯಲ್ಲಿ ಮಿನಿಸ್ಟರ್ ಎಂದರೆ ಸೇವಕ ಎಂದು ಅರ್ಥ. ಆದರೆ ವ್ಯತಿರಿಕ್ತ ಪರಿಸ್ಥಿತಿಯೇ ಗೋಚರಿಸುತ್ತಿದೆ. ಮಿನಿಷ್ಟರ್ ಪದ ಹೊತ್ತವರು ಜನರ ಒಡೆಯರಾಗ್ದಿದರೆ, ಸಾಮಾನ್ಯ ಜನತೆ ಅವರ ಸೇವಕರಂತಾಗ್ದಿದಾರೆ.
‘ನಾನು ಭೂಲೋಕಕ್ಕೆ ಬಂದ್ದಿದು ಸೇವೆ ಮಾಡಲು, ಸೇವೆ ಮಾಡಿಸಿಕೊಳ್ಳಲು ಅಲ’ ಎಂಬ ಏಸು ಸ್ವಾಮಿಯ ಮಾತನ್ನು ನಮ್ಮ ರಾಜಕಾರಿಣಿಗಳು ಅರ್ಥ ಮಾಡಿಕೊಂಡು ಅನುಸರಿಸಲು ಯತ್ನಿಸಿದರೆ ಮಾತ್ರ ಅವರ ಮನಸಿನ್ಲಲಿರುವ ಸ್ವಾರ್ಥ ದೂರವಾಗಿ ಹಣ ಗಳಿಸಿ ಬಚ್ಚಿಡುವ ಪ್ರವೃತ್ತಿಯಿಂದ ಹೊರ ಬರುತ್ತಾರೆ.
ಸರಳ ಜೀವನಕ್ಕೆ ಒತ್ತು:
ಕುಟುಂಬವೊಂದರೆ ಸರಳ ಜೀವನಕ್ಕೆ ಮಹಿಳೆಯರು ಹೆಚ್ಚು ಒತ್ತು ನೀಡಬೇಕು. ಗಂಡಸರು ಅಕ್ರಮ ರೀತಿಯ್ಲಲಿ ಹಣಗಳಿಸಲು ಯತ್ನಿಸಿದರೆ ಅವರು ಕಡಿವಾಣ ಹಾಕಬೇಕು. ಎಲ ಧರ್ಮದ ಧರ್ಮ ಗುರುಗಳು ಸಹ ಸರಳ ಜೀವನ ನಡೆಸಲು ತಮ್ಮ ಅನುಯಾಯಿಗಳಿಗೆ ಪ್ರೇರಣೆ ನೀಡಬೇಕು. ವ್ಯಕ್ತಿಯ ಮನಸಿನ್ಲಲಿ ನಾನು ಎನ್ನುವ ಗರ್ವ ಹೋಗಿ ನಾವು ಎಂಬುದು ಮೂಡಿದಾಗ ಮಾತ್ರ ದೇವರ ಪೂಜೆ ಪರಿಪೂರ್ಣವಾಗುತ್ತದೆ.
ಆಶೀರ್ವಾದ:
ಇಡೀ ಜಗತ್ತಿನ್ಲಲಿ ಶಾಂತಿ ಮತ್ತು ಸೌಹಾರ್ದತೆ ಸದಾ ಕಾಲವೂ ನೆಲೆಗೊಳ್ಳುವಂತೆ ಏಸು ಸ್ವಾಮಿ ಆಶೀರ್ವಾದಿಸಲಿ ಎಂದು ಕೋರುತ್ತೇನೆ.
