ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿ ಸದಸ್ಯ, ಚಲನಚಿತ್ರ ಗೀತರಚನಾಕಾರ, ಕವಿ, ಕಥೆಗಾರ ಎಂ.ಎನ್.ವ್ಯಾಸರಾವ್ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಲ್ದೂರಿಗೆ ಇತ್ತೀಚೆಗೆ ಆಗಮಿಸ್ದಿದರು. ಕನ್ನಡ ಚಿತ್ರರಂಗ ಮತ್ತು ಸದ್ಯದ ಸಾಹಿತ್ಯ ಲೋಕದ ಬೆಳವಣಿಗೆಗಳ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
* ಸಿನಿಮಾ ಟ್ರೆಂಡ್ಗಳು ಹತ್ತು ವರ್ಷಕ್ಕೊಮ್ಮೆ ಬದಲಾಗುತ್ತದೆ ಎನ್ನುತ್ತಾರೆ. ಹಾಗ್ದಿದ್ಲಲಿ ಸಮಕಾಲೀನ ಕನ್ನಡ ಚಿತ್ರಗಳ್ಲಲಿ ಟ್ರೆಂಡ್ ಎಂದು ಯಾವುದನ್ನು ಕರೆಯಬಹುದು?
- ಮೊದಲು ಹತ್ತು ವರ್ಷಕ್ಕೊಮ್ಮೆ ಚಿತ್ರಗಳ ಟ್ರೆಂಡ್ ಬದಲಾಗುತ್ತಿತ್ತು. ಆದರೆ ಈಗ ವರ್ಷಕ್ಕೊಮ್ಮೆ ಟ್ರೆಂಡ್ ಬದಲಾಗುತ್ತಿದೆ. ಟ್ರೆಂಡ್ಗಳ ಬಗ್ಗೆ ಹಾಗೂ ಚಲನಚಿತ್ರಗಳ ಗುಣಮಟ್ಟದ ಬಗ್ಗೆ ನನ್ನ ಗೆಳೆಯರೂ ಆಗಿರುವ ನಿರ್ಮಾಕರೊಬ್ಬರು ಹೇಳ್ದಿದ ಮಾತೊಂದನ್ನು ನಿಮ್ಮ ಓದುಗರ ಜತೆ ಹಂಚಿಕೊಳ್ಳಬೇಕು ಎನಿಸುತ್ತೆ. “ಕನ್ನಡ ಚಲನಚಿತ್ರ ರಂಗ ಇದೀಗ ತೀವ್ರ ನಿಗಾ ಕೊಠಡಿಯ್ಲಲಿದೆ. ಸೂಕ್ತ ಚಿಕಿತ್ಸೆ ಸಿಗದ್ದಿದ್ಲಲಿ ಅದು ಶೀಘ್ರದ್ಲಲಿಯೇ ಸತ್ತುಹೋಗುತ್ತದೆ”.
* ಅವರ ಮಾತು ಬಿಡಿ, ಚಿತ್ರರಂಗವನ್ನು ಹತ್ತಿರದಿಂದ ಗಮನಿಸಿರುವ ನಿಮ್ಮ ಅಭಿಪ್ರಾಯವೇನು? ಅಷ್ಟನ್ನು ತಿಳಿಸಿ…
- ಕನ್ನಡ ಚಿತ್ರರಂಗದ ಇತ್ತೀಚಿನ ಬೆಳವಣಿಗೆಗಳು ಆತಂಕ ಹುಟ್ಟಿಸುತ್ತಿವೆ. ಚಲನಚಿತ್ರಗಳನ್ನು ಮುನ್ನಡೆಸಬೇಕಾದ ‘ಆತ್ಮ’ ದಿನದಿಂದ ದಿನಕ್ಕೆ ಕೊಳೆಯುತ್ತಿದೆ. ಇಡೀ ಕುಟುಂಬ ಕುಳಿತು ನೋಡಬಹುದಾದ ಬೆರಳೆಣಿಕೆಯಷ್ಟು ಸದಭಿರುಚಿಯ ಚಿತ್ರಗಳು ಮಾತ್ರ ಇಂದು ತೆರೆ ಕಾಣುತ್ತಿವೆ. ಇದು ನನ್ನ ಖೇದ ಮತ್ತು ಗಾಢವಾಗಿ ನನ್ನನ್ನು ಕಾಡುತ್ತಿರುವ ಆತಂಕ.
* ಅದು ಎಲರಿಗೂ ಗೊತ್ತಿರುವ ವಿಚಾರ…
- ಹೌದು, ಅದು ಎಲರಿಗೂ ಗೊತ್ತಿರುವ ವಿಚಾರ. ಆದರೆ ಇಂದಿನ ನಿರ್ಮಾಕರು ಯಾಕೆ ಅದನ್ನು ಗಮನಿಸುತ್ತ್ಲಿಲ ಎಂಬುದೇ ನನ್ನ ಪ್ರಶ್ನೆ. ಸಿನಿಮಾ ತೆಗೆಯುವುದು ಒಂದು ಕಲಾತ್ಮಕ ‘ಹುಚ್ಚು’ ಆಗ್ದಿದ ಕಾಲದ್ಲಲಿ ಇಂಥ ಪರಿಸ್ಥಿತಿ ತಲೆದೋರಿರಲ್ಲಿಲ. ಅದೊಂದು ಹಣ ಹಾಕಿ ಹಣ ತೆಗೆಯುವ ‘ಪಕ್ಕಾ ವ್ಯಾಪಾರ’ವಾದ ನಂತರದ ವಿದ್ಯಮಾನಕ್ಕೆ ನಾವು ಸಾಕ್ಷಿಯಾಗ್ದಿದೇವೆ.
* ಸೆನ್ಸಾರ್ ಮಂಡಳಿಯ ಸದಸ್ಯರೂ ಆಗಿರುವ ನೀವು ಇತ್ತೀಚಿನ ಚಿತ್ರಗಳ ಬಗ್ಗೆ ಹೇಳುವುದೇನು? ನಮಗೆ ಎಂಥ ಚಿತ್ರಗಳು ಬೇಕು?
- ವ್ಯಾಪಾರಿ ಚಿತ್ರಗಳು ಮತ್ತು ಕಲಾತ್ಮಕ ಚಿತ್ರಗಳು ಎಂಬ ದ್ವೀಪಗಳು ಕನ್ನಡ ಚಿತ್ರರಂಗದ್ಲಲಿ ಬಹುಕಾಲದಿಂದ ಉಳಿದುಕೊಂಡಿವೆ. ಇವೆರಡಕ್ಕೂ ಸೇತುವೆ ನಿರ್ಮಿಸುವ ಪ್ರತಿಭಾವಂತರು ಇಂದಿನ ತುರ್ತು. ಸೆನ್ಸಾರ್ಗೆಂದು ತೋರಿಸುವ ಕೆಲವು ಚಲನಚಿತ್ರಗಳ್ಲಲಿ ಒಂದೂ ಶಾಟ್ ಉಳಿಸಬೇಕು ಎನಿಸುವುದ್ಲಿಲ. ಕನ್ನಡ ಚಿತ್ರರಂಗವನ್ನು ಐಸಿಯುನಿಂದ ಹೊರಗೆ ತರುವ ಗಟ್ಟಿ ಚಿತ್ರಗಳು ಬೇಕು. ಅವು ಕಲಾತ್ಮಕವಾಗಿಯೂ ಉತ್ತಮ ಗುಣಮಟ್ಟ್ದದಾಗಿರಬೇಕು, ಸಾಮಾನ್ಯ ಜನರಿಗೂ ತಲುಪುವಂತಿರಬೇಕು. ನಮಗೆ ‘ಸೇತುವೆ’ ಕಟ್ಟುವ ಗಟ್ಟಿ ಜನ ಬೇಕು.
* ನೀವು ಚಿತ್ರ ತಯಾರಿಸುವವರನ್ನೇ ದೂರುತ್ತೀರಿ, ಅವರು ನೋಡಿದರೆ ‘ಜನ ಬಯಸುವುದನ್ನು ನಾವು ಕೊಡುತ್ತೇವೆ ಎನ್ನುತ್ತಾರೆ’…
- ‘ತೆರೆಯ ಮೇಲೆ ರಕ್ತ ಚ್ಲೆಲುವುದನ್ನು ನೋಡಬೇಕು’ ಎಂದು ಯಾವೊಬ್ಬ ಪ್ರೇಕ್ಷಕನೂ ಯಾವುದೇ ನಿರ್ಮಾಪಕನಿಗೆ ಬೇಡಿಕೆ ಸ್ಲಲಿಸಿ ಪತ್ರ ಬರೆದ ಬಗ್ಗೆ ನನಗೆ ತಿಳಿದ್ಲಿಲ. ಜನರಿಗೆ ಎಂಥ್ದದನ್ನು ಬಯಸಬೇಕು ಎಂಬುದನ್ನೂ ತಿಳಿಸಿಕೊಡುವ ಹೊಣೆ ಪ್ರಜ್ಞಾವಂತರಿಗಿದೆ.
* ತಿಳಿಸಿಕೊಡುವ ಬಗೆಯಾದರೂ ಹೇಗೆ? ತಿಳಿಸಿಕೊಡುವವರು ಯಾರು?
- ಇದು ಎಲ ಸಹೃದಯರ ಜವಾಬ್ದಾರಿ. ಈ ಕುರಿತು ಚಲನಚಿತ್ರ ಅಕಾಡೆಮಿ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವುಗಳ ಪೈಕಿ ಬೆಳ್ಳಿಸಾಕ್ಷಿ ಮತ್ತು ಬೆಳ್ಳಿಮಂಡಲ ಯೋಜನೆಗಳು ಅತ್ಯಂತ ಮುಖ್ಯ. ಬೆಳ್ಳಿಮಂಡಲ ಎನ್ನುವುದು ಜ್ಲಿಲೆ ತ್ಲಾಲೂಕು ಮಟ್ಟದ ಫಿಲಂ ಸೊಸೈಟಿ, ಬೆಳ್ಳಿಸಾಕ್ಷಿ ಎನ್ನುವುದು ಕಾಲೇಜುಗಳ್ಲಲಿ ಅಸ್ತಿತ್ವಕ್ಕೆ ಬರುವ ಫಿಲಂಕ್ಲಬ್ಗಳು. ಸಾಮಾನ್ಯ ಜನರಿಗೆ ಸದಭಿರುಚಿಯ ಚಿತ್ರಗಳನ್ನು ತೋರಿಸಿ ಅವರ ಸಂವೇದನೆಯನ್ನು ಮತ್ತಷ್ಟು ಮೊನಚು ಮಾಡುವ ಮಹತ್ವದ ಪ್ರಯತ್ನ ಈ ಯೋಜನೆಗಳ್ಲಲಿ ಅಡಗಿದೆ.
ಎಲವೂ ಅಂದುಕೊಂಡಂತೆ ಆದರೆ, ‘ಪ್ರೇಕ್ಷಕ ಕೇಳ್ದಿದನ್ನು ನಾವು ಕೊಟ್ಟ್ದಿದೇವೆ’ ಎಂಬ ನಿರ್ಮಾಪಕರ ದೂರು ಇನ್ನು ಕೆಲವೇ ವರ್ಷಗಳ್ಲಲಿ ಅಡಗುತ್ತದೆ. ಉತ್ತಮ ಚಿತ್ರ ಬೇಕು ಎಂಬ ತಹತಹ ಪ್ರೇಕ್ಷಕನ್ಲಲಿ ಬಂದಾಗ ಚಿತ್ರರಂಗ ಹೇಗೆ ಸ್ಪಂದಿಸುತ್ತದೆ ಎನ್ನುವುದನ್ನು ಕಾದು ನೋಡಬೇಕು.
* ಚಲನಚಿತ್ರವನ್ನು ಒಂದು ಕಲೆಯಾಗಿ- ಶಾಸ್ತ್ರೀಯವಾಗಿ ಅಭ್ಯಾಸ ಮಾಡುವ ಅನೇಕ ಗಂಭೀರ ನಿಯತಕಾಲಿಕೆಗಳು ಮಲೆಯಾಳಂ, ಬೆಂಗಾಲಿ ಭಾಷೆಗಳ್ಲಲಿವೆ. ಕನ್ನಡದ್ಲಲಿ ಏಕೆ ಅಂಥ ಪ್ರಯತ್ನಗಳಾಗ್ಲಿಲ?
- ಮುಂದಿನ ದಿನಗಳ್ಲಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಇಂಥ ಪ್ರಯತ್ನಕ್ಕೆ ಮುಂದಾಗಲಿದೆ. ಚಲನಚಿತ್ರ ನಿರ್ಮಾಣದ್ಲಲಿ ತೊಡಗಿರುವ ತಂತ್ರಜ್ಞರು ಮತ್ತು ಕಲಾವಿದರಿಂದಲೇ ಲೇಖನಗಳನ್ನು ಬರೆಸಿ, ಅವನು ಅನುಭವ ಮತ್ತು ಅನಿಸಿಕೆಗಳನ್ನು ಬೆಳಕಿಗೆ ತರಲು ಒಂದು ನಿಯತಕಾಲಿಕೆಯನ್ನು ಪ್ರಕಟಿಸುವ ಕೆಲಸಗಳು ಸಾಗಿವೆ. ಕನ್ನಡ ಚಿತ್ರರಂಗದ ಬಹುಕಾಲದ ಕೊರತೆಯನ್ನು ಈ ಯತ್ನ ತುಂಬಿಕೊಡಲಿದೆ.
* ನೀವು ತುಂಬ ಇಷ್ಟಪಟ್ಟ ಚಲನಚಿತ್ರ ಯಾವುದು? ಎರಡನೇ ಯೋಚನೆಯೇ ಇಲದೆ ಥಟ್ಟಂತ ಹೇಳಿ…
- ಬಂಗಾರದ ಮನುಷ್ಯ.
* ಯಾಕೆ?
- ಮನುಷ್ಯನೊಬ್ಬನ ಸಾರ್ಥಕ ಬದುಕು ಅಂದರೆ ‘ಬಂಗಾರದ ಮನುಷ್ಯ’ ಚಿತ್ರದ್ಲಲಿರುವ ರಾಜ್ಕುಮಾರ್ ಪಾತ್ರ. ಕಥೆ, ನಿರ್ಮಾಣ, ಸಂಗೀತ, ಅಭಿನಯ ಎಲವೂ ಒಂದಕ್ಕೊಂದು ಪೂರಕವಾಗಿರುವ ಈ ಚಿತ್ರ ನನಗೆ ತುಂಬಾ ಇಷ್ಟ. ನಾಗರಹಾವು, ಬೆಳ್ಳಿಮೋಡ ಚಲನಚಿತ್ರಗಳನ್ನೂ ನಾನು ತುಂಬ ಮೆಚ್ಚುತ್ತೇನೆ.
-ಸಂದರ್ಶನ: ಡಿ.ಎಂ.ಘನಶ್ಯಾಮ.
